ಕಾಂತರಾಜು ಕನಕಪುರ ಅವರ ಕವಿತೆಗಳು

ಕಾಂತರಾಜು ಕನಕಪುರ ಅವರ ಕವಿತೆಗಳು ಜಾತಿ ಹೇವರಿಕೆ ಹುಟ್ಟಿಸುವವಿಕಾರ ವೃಕ್ಷಎಲ್ಲಿರುವುದೋ ಬೇರುಯಾರೂ ಅರಿಯರು…ರೆಂಬೆ-ಕೊಂಬೆಗಳು ಲೆಕ್ಕಕ್ಕೆಸಾವಿರಾರು…! ಅವರವರ ಅನುಕೂಲಕೆಯಾರೋ ನೆಟ್ಟರು…ಯಾರೋ ನೀರಿಟ್ಟರು…ಯಾರೋ ಗೊಬ್ಬರ ಕೊಟ್ಟರು…ಹಲವರು ಕಣ್ಣೀರಿಟ್ಟರು…ಅಂತು ಬೆಳೆದು ನಿಂತಿದೆಉದ್ದಂಡ ವಿಷ ವೃಕ್ಷ…! ಈ ಮರದ ನೆರಳು ನೆರಳಲ್ಲ ಅದುಅನುನಯದಿ ನೇಯ್ದ ಉರುಳುಅನುಕೂಲ ಪಡೆದಿಹರು ಕೆಲವರುಸಿಕ್ಕಿಬಿದ್ದು ನರಳುತ್ತಿರುವರು ಹಲವರು ಇನ್ನಾದರೂ…ನಾವು ಹಿಡಿಯಬೇಕಿದೆಅರಿವಿನಿಂದ ಮಸೆದ ಸಮಾನತೆಯ ಅಸ್ತ್ರವನುಕಡಿದುರುಳಿಸಲು ಜಾತಿಯ ವಿಷ ವೃಕ್ಷವನುಆಗ ಮಾತ್ರ ಆಗಬಹುದು ದೇಶದ ಏಳಿಗೆತಪ್ಪಿದರೆ ನಮ್ಮನ್ನು ಕ್ಷಮಿಸದೆಂದೆಂದೂಮುಂಬರುವ ಪೀಳಿಗೆ… ———————– ನಿನ್ನ ಹಾಗೆಯೇ ಇದೆ ಮನದಣಿಯೆ ನೋಡಿ ಮಣಿದೆತುಟಿ … Continue reading ಕಾಂತರಾಜು ಕನಕಪುರ ಅವರ ಕವಿತೆಗಳು